
ಘಾಟಿಯಲ್ಲಿ ಮಾಯವಾದ 400 ಕೋಟಿ!
ಸ್ನೇಹಿತರೇ, 2026ರಲ್ಲಿ ಕೇಳಿಬರುತ್ತಿರುವ ಅತ್ಯಂತ ಭಯಾನಕ ಹಗರಣವೊಂದರ ಬಗ್ಗೆ ಇವತ್ತು ನಾನು ನಿಮಗೆ ಹೇಳಲಿದ್ದೇನೆ. ಊಹಿಸಿಕೊಳ್ಳಿ, ಬೆಳಗಾವಿಯ ಚೋರ್ಲಾ ಘಾಟಿಯ ದಟ್ಟ ಕಾಡಿನಲ್ಲಿ ಎರಡು ಟ್ರಕ್ಗಳು ಸಾಗುತ್ತಿವೆ, ಅದರಲ್ಲಿ ಬರೋಬ್ಬರಿ 400 ಕೋಟಿ ರೂಪಾಯಿ ಹಣವಿದೆ! ಆದರೆ ಬೆಚ್ಚಿಬೀಳುವ ವಿಷಯ ಏನಂದರೆ, ಈ ಟ್ರಕ್ಗಳನ್ನು ಅದ್ದೂರಿಯಾಗಿ ಹೈಜಾಕ್ ಮಾಡಲಾಗಿದೆ. ಈ ಪ್ರಕರಣ ಇಷ್ಟು ಗಂಭೀರವಾಗಿದೆ ಎಂದರೆ, ಘಟನೆ ನಡೆದಿದ್ದು ಅಕ್ಟೋಬರ್ ತಿಂಗಳಲ್ಲಿ, ಆದರೆ ದೂರು ದಾಖಲಾಗಿದ್ದು ಜನವರಿ 1ರಂದು! ಅಂದರೆ ಮೂರು ತಿಂಗಳು ಈ ರಹಸ್ಯ ಹಾಗೆಯೇ ಅಡಗಿತ್ತು.
ಈ 400 ಕೋಟಿ ಯಾರದು? ಇದು ನಿಜಕ್ಕೂ 2000 ರೂಪಾಯಿ ನೋಟುಗಳೇ? ಅಥವಾ ಮಹಾರಾಷ್ಟ್ರ ಚುನಾವಣೆಗಾಗಿ ಸಾಗಿಸುತ್ತಿದ್ದ ಕಪ್ಪು ಹಣವೇ? ಹೀಗೆ ಹತ್ತಾರು ಪ್ರಶ್ನೆಗಳು ಈಗ ಪೊಲೀಸರನ್ನು ಕಾಡುತ್ತಿವೆ. ಪೊಲೀಸರು ಇನ್ವೆಸ್ಟಿಗೇಶನ್ ಮಾಡುತ್ತಿರುವಾಗಲೇ ಈ ಕೇಸ್ ದಿನಕ್ಕೊಂದು ತಿರುವು ಪಡೆಯುತ್ತಿದೆ. ಬೆಳಗಾವಿ ಎಸ್ಪಿ ಅವರಿಗೆ ಮಹಾರಾಷ್ಟ್ರ ಪೊಲೀಸರಿಂದ ಬಂದ ಆ ಒಂದು ರಹಸ್ಯ ಪತ್ರ ಈಗ ಈ ಹೈಜಾಕ್ ಕಥೆಯನ್ನು ಬೀದಿಗೆ ತಂದಿದೆ. ಬನ್ನಿ, ಈ ನಿಗೂಢ ಹಗರಣದ ಅಸಲಿ ಮುಖವನ್ನು ಅನಾವರಣ ಮಾಡೋಣ.
ಅಕ್ಟೋಬರ್ 16, 2025 ರಂದು ಗೋವಾದಿಂದ ಮಹಾರಾಷ್ಟ್ರಕ್ಕೆ ಹಣ ಸಾಗಿಸುವಾಗ ಈ ದರೋಡೆ ನಡೆದಿದೆ ಎನ್ನಲಾಗುತ್ತಿದೆ. ಇದರ ಹಿಂದೆ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಸೇತ್ ಹೆಸರು ಕೇಳಿಬರುತ್ತಿದೆ. ಮಾಹಿತಿ ಪ್ರಕಾರ, ಈ ಹಣದ ಬಗ್ಗೆ ತಿಳಿದಿದ್ದ ಕಿಶೋರ್ ಅವರ ನಿಕಟವರ್ತಿ ಸಂದೀಪ್ ಪಾಟೀಲ್ ಎಂಬುವವರೇ ಈ ಹೈಜಾಕ್ ಸ್ಕೆಚ್ ಹಾಕಿದ್ದಾರೆ ಎನ್ನಲಾಗಿದೆ. ಆದರೆ ಟ್ವಿಸ್ಟ್ ಎಂದರೆ, ಈ ಸ್ಕೆಚ್ ಹಿಂದೆ ಇನ್ನೂ ದೊಡ್ಡ ತಲೆಗಳು ಕೆಲಸ ಮಾಡುತ್ತಿವೆ.
ಇಲ್ಲಿ ವಿರಾಟ್ ಗಾಂಧಿ ಎಂಬುವವನು ಈ ಗ್ಯಾಂಗ್ನ ಕಿಂಗ್ಪಿನ್ ಎನ್ನಲಾಗುತ್ತಿದೆ. ಇವನ ತಂಡ ಅಕ್ಟೋಬರ್ 22 ರಂದು ಸಂದೀಪ್ ದತ್ತ ಪಾಟೀಲ್ನನ್ನು ಫಾರ್ಚುನರ್ ಕಾರಿನಲ್ಲಿ ಕಿಡ್ನಾಪ್ ಮಾಡಿ, ಹಣ ಎಲ್ಲಿದೆ ಎಂದು ಚಿತ್ರಹಿಂಸೆ ನೀಡಿದ್ದಾರೆ. “ನಮ್ಮ 400 ಕೋಟಿ ಹಣ ನೀನೇ ಕದ್ದಿದ್ದೀಯ” ಎಂದು ಅವನ ಮೇಲೆ ಅಟ್ಯಾಕ್ ಮಾಡಿದ್ದಾರೆ. ಈ ಕಿಡ್ನಾಪ್ ಸ್ಟೋರಿ ಹೊರಬಂದ ಮೇಲೆಯೇ 400 ಕೋಟಿ ಹೈಜಾಕ್ ಆಗಿರುವ ವಿಷಯ ಜಗತ್ತಿಗೆ ಗೊತ್ತಾಗಿದ್ದು!
ಮೌನಕ್ಕೆ ಶರಣಾದ ಹಣದ ಮಾಲೀಕರು!
ಸ್ನೇಹಿತರೇ, ಈ ಕೇಸ್ನಲ್ಲಿ ದೊಡ್ಡ ಪ್ರಶ್ನೆ ಇರೋದೇ ಇಲ್ಲಿ. 400 ಕೋಟಿ ಕಳೆದುಕೊಂಡ ವ್ಯಕ್ತಿ ಯಾಕೆ ತಕ್ಷಣ ಪೊಲೀಸ್ ಮೆಟ್ಟಿಲೇರಲಿಲ್ಲ? ಸಾಮಾನ್ಯವಾಗಿ ನಮ್ಮ ಮೊಬೈಲ್ ಕಳವಾದರೆ ನಾವು ಗಾಬರಿಯಾಗುತ್ತೇವೆ, ಅಂತಹದ್ದರಲ್ಲಿ ಇಷ್ಟು ಕೋಟಿ ಕಳೆದುಕೊಂಡ ಮೇಲೆ ಮಾಲೀಕ ಸುಮ್ಮನಿದ್ದಿದ್ದು ಯಾಕೆ? ಬಹುಶಃ ಅದು ಕಪ್ಪು ಹಣವಾಗಿದ್ದಕ್ಕೆ ಐಟಿ (Income Tax) ಮತ್ತು ಇಡಿ (ED) ಅಧಿಕಾರಿಗಳ ಭಯ ಕಾಡುತ್ತಿದೆಯೇ? ಅಥವಾ ಈ ಹಣದ ಹಿಂದೆ ಪ್ರಭಾವಿ ರಾಜಕಾರಣಿಗಳ ನೆರಳು ಇದೆಯೇ ಎಂಬ ಅನುಮಾನ ದಟ್ಟವಾಗಿದೆ.
ಬೆಳಗಾವಿ ಎಸ್ಪಿ ಅವರ ಪ್ರಕಾರ, ಮಹಾರಾಷ್ಟ್ರ ಪೊಲೀಸರಿಂದ ಈ ಪ್ರಕರಣದ ಬಗ್ಗೆ ತನಿಖೆಗೆ ಸಹಕರಿಸಲು ಲೆಟರ್ ಬಂದಿದೆ. ಹೊಸ ಬಿಎನ್ಎಸ್ (BNS) ಕಾನೂನಿನ ಅಡಿಯಲ್ಲಿ ಈ ಕೇಸನ್ನು ಎಲ್ಲಿ ಬೇಕಾದರೂ ದಾಖಲಿಸಬಹುದು. ಹಾಗಾಗಿ ನಾಸಿಕ್ನಲ್ಲಿ ದೂರು ದಾಖಲಾಗಿ ಈಗ ಅದು ಕರ್ನಾಟಕದ ಬೆಳಗಾವಿಯ ವ್ಯಾಪ್ತಿಗೆ ಬಂದು ನಿಂತಿದೆ. ಆದರೆ ಪೊಲೀಸರಿಗೆ ಇರುವ ದೊಡ್ಡ ಸಮಸ್ಯೆ ಅಂದರೆ, ಕಂಪ್ಲೇಂಟ್ ಕೊಟ್ಟವನು ಪ್ರತ್ಯಕ್ಷದರ್ಶಿ ಅಲ್ಲ! ಯಾರೋ ಹೇಳಿದ್ದನ್ನು ಕೇಳಿ ಅವನು ದೂರು ನೀಡಿದ್ದಾನೆ.
ಸದ್ಯಕ್ಕೆ ಮಹಾರಾಷ್ಟ್ರದಲ್ಲಿ ವಿಶೇಷ ತನಿಖಾ ತಂಡ (SIT) ರಚನೆಯಾಗಿದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಮೂರು ರಾಜ್ಯಗಳ ಪೊಲೀಸರು ಈಗ ಈ ಕೇಸ್ ಬೆನ್ನತ್ತಿದ್ದಾರೆ. ತನಿಖೆ ನಡೆಯುತ್ತಿರುವ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲ, ಮೊಬೈಲ್ ನೆಟ್ವರ್ಕ್ ಕೂಡ ಇಲ್ಲ. ಇದು ದರೋಡೆಕೋರರಿಗೆ ಪ್ಲಸ್ ಪಾಯಿಂಟ್ ಆಗಿದೆ. ಹಣದ ಮಾಲೀಕ ಕಿಶೋರ್ ಸೇತ್ ಇನ್ನೂ ಅಧಿಕೃತವಾಗಿ ಹಣದ ಬಗ್ಗೆ ಸತ್ಯಾಂಶ ಬಿಚ್ಚಿಟ್ಟಿಲ್ಲ.
ಮಹಾರಾಷ್ಟ್ರದಲ್ಲಿ ಡಿಸೆಂಬರ್ನಲ್ಲಿ ನಡೆದ ಸ್ಥಳೀಯ ಚುನಾವಣಾ ಖರ್ಚಿಗಾಗಿ ಈ 400 ಕೋಟಿ ರೂಪಾಯಿಗಳನ್ನು ಟ್ರಕ್ ಮೂಲಕ ಸಾಗಿಸಲಾಗುತ್ತಿತ್ತಾ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. 2000 ರೂಪಾಯಿ ನೋಟುಗಳನ್ನು ಬ್ಯಾಂಕ್ಗೆ ಜಮಾ ಮಾಡುವ ಬದಲು ಈ ರೀತಿ ಸಾಗಿಸುತ್ತಿರುವುದು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ. ಲೀಗಲ್ ಹಣವಾಗಿದ್ದರೆ ಮಾಲೀಕ ಖಂಡಿತಾ ಇಷ್ಟೊತ್ತಿಗಾಗಲೇ ಸದ್ದು ಮಾಡುತ್ತಿದ್ದ. ಆದರೆ ಇಲ್ಲಿ ಮೌನವೇ ಮಂತ್ರವಾಗಿದೆ!

ರಾಜಕೀಯ ಆಟವೋ ಅಥವಾ ದೊಡ್ಡ ದರೋಡೆಯೋ?
ಸ್ನೇಹಿತರೇ, ಈ ಪ್ರಕರಣವನ್ನು ಗಮನಿಸಿದರೆ ಇದರಲ್ಲಿ ಯಾರೋ ಪ್ರಭಾವಿಗಳ ಕೈವಾಡ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ. ಬ್ಯಾಂಕ್ನಲ್ಲಿ ಒಂದು ದೊಡ್ಡ ಟ್ರಾನ್ಸಾಕ್ಷನ್ ಮಾಡಬೇಕಾದರೆ ಹತ್ತು ಪ್ರಶ್ನೆ ಕೇಳುತ್ತಾರೆ, ಅಂತಹದ್ದರಲ್ಲಿ ಕೋಟಿ ಕೋಟಿ ಹಣವನ್ನು ಟ್ರಕ್ನಲ್ಲಿ ಸಾಗಿಸುತ್ತಿದ್ದಾರೆ ಎಂದರೆ ಇದು ದೊಡ್ಡ ಮಟ್ಟದ ಅಕ್ರಮವೇ ಸರಿ. ಒಂದು ವೇಳೆ ಇದರಲ್ಲಿ ರಾಜಕೀಯ ವ್ಯಕ್ತಿಗಳು ಶಾಮೀಲಾಗಿದ್ದರೆ, ಈ ಕೇಸ್ ಯಾವುದೇ ರಿಸಲ್ಟ್ ಇಲ್ಲದೆ ಗಾಳಿಯಲ್ಲಿ ಹೋಗುವ ಸಾಧ್ಯತೆಯೂ ಹೆಚ್ಚಿದೆ.
ಬೆಳಗಾವಿ ಎಸ್ಪಿ ಅವರು ಈಗ ಈ ಘಾಟ್ ರಸ್ತೆಯಲ್ಲಿ 400 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಪ್ಲಾನ್ ಮಾಡುತ್ತಿದ್ದಾರೆ. ಆದರೆ ಕಳೆದುಹೋದ ಹಣದ ಕಥೆ ಏನಾಗಬಹುದು? ಪೊಲೀಸರು ಕಿಡ್ನಾಪ್ ಆಗಿದ್ದ ಸಂದೀಪ್ನ ಹೇಳಿಕೆಯನ್ನು ಮಾತ್ರ ನಂಬಲು ಸಾಧ್ಯವಿಲ್ಲ, ಅವರಿಗೆ ಬಲವಾದ ಸಾಕ್ಷ್ಯ ಬೇಕಿದೆ. ಮಾಲೀಕನೇ ಮುಂದೆ ಬಂದು ಹಣದ ಮೂಲವನ್ನು ಹೇಳುವವರೆಗೂ ಈ ಕೇಸ್ ಕೇವಲ ಆರೋಪಗಳ ಸುತ್ತಲೇ ಸುತ್ತುತ್ತಿರುತ್ತದೆ.
ಕೊನೆಯದಾಗಿ, ಒಂದು ಮಾತು ನೆನಪಿಡಿ – ಬೆಂಕಿ ಇಲ್ಲದೆ ಹೊಗೆಯಾಡಲು ಸಾಧ್ಯವಿಲ್ಲ. 400 ಕೋಟಿ ಎಂಬ ದೊಡ್ಡ ಮೊತ್ತದ ಈ ಹಗರಣ ನಿಜಕ್ಕೂ ಬಟಾಬಯಲಾಗುತ್ತಾ? ಅಥವಾ ಅಲಿಗೇಶನ್ ಹೆಸರಲ್ಲಿ ಮುಚ್ಚಿ ಹೋಗುತ್ತಾ? ಎಂಬುದನ್ನು ಕಾದು ನೋಡಬೇಕು. ಇದು ಅಸಲಿ ಕಥೆಯೋ ಅಥವಾ ಸುಳ್ಳು ಮಾಹಿತಿಯೋ ಎಂಬುದು ತನಿಖೆ ಮುಗಿದ ಮೇಲೆ ಪೊಲೀಸರೇ ಅಧಿಕೃತವಾಗಿ ತಿಳಿಸಬೇಕಿದೆ.
ನಿಮ್ಮ ಅನಿಸಿಕೆಗಳನ್ನ ಮರಿದೆ ಕಾಮೆಂಟ್ ಮಾಡಿ ತಿಳಿಸಿ. ಇಂಥದ್ದೇ ಇನ್ನು ಹೆಚ್ಚು ಮಿಸ್ಟರಿ ಮತ್ತು ರೋಚಕ ಕಥೆಗಳಿಗಾಗಿ ನಮ್ಮ “Insider ಕನ್ನಡ” ಬ್ಲಾಗ್ ಓದೋದನ್ನ ಮರೀಬೇಡಿ. ಸಿಗೋಣ ಮುಂದಿನ ಪೋಸ್ಟ್ನಲ್ಲಿ!
